ಅರ್ಜುನ್ ಬಿಜ್ಲಾನಿಯವರು ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಟ.ಅವರು ಬಾಲಾಜಿ ಟೆಲಿಫಿಲ್ಮ್ಸ್ ನ ಕಾರ್ತಿಕ ಎಂಬ ದೂರದರ್ಶನ ಕಾರ್ಯಕ್ರಮದ ಮೂಲಕ ಚೊಚ್ಚಲ ಪ್ರದರ್ಶನ ಮಾಡಿದರು.ನಂತರ ಅವರು ಲೆಫ್ಟ್ ರೈಟ್ ಲೆಫ್ಟ್, ಮಿಲೇ ಜಬ್ ಹಮ್ ತುಮ್, ಮೇರೀ ಆಶಿಕೀ ತುಮ್ ಸೇ ಹೀ, ನಾಗಿನ್ ಮತ್ತು ಪರ್ದೇಸ್ ಮೇ ಹೇ ಮೇರಾ ದಿಲ್ ಸೇರಿದಂತೆ ಇತರ ಪ್ರಸಿದ್ದ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.೨೦೧೬ ರಲ್ಲಿ ಅವರು 'ಝಲಕ್ ದಿಖ್ಲಾ ಝಾ ೯' ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.ಅದೇ ವರ್ಷದಲ್ಲಿ ಅವರು 'ಡೈರೆಕ್ಟ್ ಇಶ್ಕ್' ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು.೨೦೧೮ ರಲ್ಲಿ ಅವರು ಕಲರ್ಸ್ ಟಿವಿ ಯ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದಿವಾನೆ' ಯ ಹೋಸ್ಟ್ ಆಗಿಯೂ ಕಾಣಿಸಿಕೊಂಡಿದ್ದಾರೆ. == ಆರಂಭಿಕ ಜೀವನ == ಅರ್ಜುನ್ ಬಿಜ್ಲಾನಿಯವರು ಅಕ್ಟೋಬರ್ ೩೧, ೧೯೮೨ ರಂದು ಭಾರತದ ಮಹಾರಾಷ್ಟ್ರದ ಮುಂಬೈನಲ್ಲಿ ಸಿಂಧಿ ಹಿಂದೂ ಕುಟುಂಬದಲ್ಲಿ ಜನಿಸಿದರು.ಅವರು ತಮ್ಮ ಶಾಲಾ ಶಿಕ್ಷಣವನ್ನು ಬಾಂಬೆ ಸ್ಕಾಟಿಷ್ ಸ್ಕೂಲ್, ಮಹಿಮ್ ನಿಂದ ಹಾಗೂ ತಮ್ಮ ಕಾಲೇಜು ಶಿಕ್ಷಣವನ್ನು ಹೆಚ್.ಆರ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಎಕನಾಮಿಕ್ಸ್ ನಿಂದ ಪಡೆದರು.ಅವರು ಹತ್ತೊಂಬತ್ತನೆಯ ವಯಸ್ಸಿನಲ್ಲಿ ತಮ್ಮ ತಂದೆ ಸುದರ್ಶನ್ ಬಿಜ್ಲಾನಿಯವರನ್ನು ಕಳೆದುಕೊಂಡರು. == ವೈವಾಹಿಕ ಜೀವನ == ಅರ್ಜುನ್ ಬಿಜ್ಲಾನಿಯವರು ಮೇ ೨೦, ೨೦೧೩ ರಂದು ತಮ್ಮ ದೀರ್ಘಕಾಲದ ಗೆಳತಿ ನೇಹಾ ಸ್ವಾಮಿಯವರನ್ನು ವಿವಾಹವಾದರು.ಇವರಿಬ್ಬರು ಜನವರಿ ೨೦,೨೦೧೫ ರಂದು ಅಯಾನ್ ಬಿಜ್ಲಾನಿ ಎಂಬ ಗಂಡು ಮಗುವಿಗೆ ಪೋಷಕರಾದರು. == ದೂರದರ್ಶನ == === ಹೋಸ್ಟ್ ಆಗಿ === === ವಿಶೇಷ ಪ್ರದರ್ಶನಗಳು === == ಚಲನಚಿತ್ರಗಳ ಪಟ್ಟಿ == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==